Vol.37 : Haaduva Alleluia

Manufacturer : Rev.Fr.Jerry Sequeira

1. ಜಯಕೊಡುವಾ (1 Jn 5:4) ದೇವರಿಂದ ಜನಿಸಿದ ಪ್ರತಿ ಒಬ್ಬನೂ ಲೋಕವನ್ನು ಜಯಿಸುತ್ತಾನೆ. ಲೋಕವನ್ನು ಜಯಿಸುವಂಥದು ನಮ್ಮ ವಿಶ್ವಾಸವೇ. (ಯೊವಾನ್ನನು ಬರೆದ ಮೊದಲನೆಯ ಪತ್ರ: ಐದನೆಯ ಅಧ್ಯಾಯ, ನಾಲ್ಕನೆ ವಾಕ್ಯ)

2. ಸ್ತೋತ್ರ ದೆವಾ (Psalm 100:4) ಆತನ ಗೃಹದ್ವಾರವನು ಪ್ರವೇಶಿಸಿ ಧನ್ಯವಾದದೊಂದಿಗೆ, ಆತನ ಆವರಣದಲಿ ನಿಲ್ಲಿರಿ ಸ್ತುತಿಸ್ತೋತ್ರಗಳೊಂದಿಗೆ, ಆತನ ನಾಮವನು ಕೊಂಡಾಡಿ ಉಪಕಾರಸ್ಮರಣೆಯೊಂದಿಗೆ. (ಕೀರ್ತನೆಗಳು: ನೂರನೆಯ ಅಧ್ಯಾಯ, ವಾಕ್ಯ ನಾಲ್ಕು)

3. ಭೂಮಿ ಆಕಾಶ (Psalm 148:1-2) ಹೊಗಳಿರಿ ಸ್ವರ್ಗದಿಂದ ಪ್ರಭುವನು, ವಂದಿಸಿ ಮಹೋನ್ನತದಲಿ ಆತನನು. ಆತನ ಸಮಸ್ತ ದೂತರೇ, ಸ್ತುತಿಸಿ ಆತನನು. ಆತನ ಎಲ್ಲಾ ಗಣಗಳೇ, ಹೊಗಳಿ ಆತನನು. (ಕೀರ್ತನೆಗಳು: ನೂರ ನಲ್ವತ್ತ ಎಂಟನೆಯ ಅಧ್ಯಾಯ, ಒಂದರಿಂದ ಎರಡು ವಾಕ್ಯಗಳು)

4. ಹಾಡೋಣ ಹಾಡೋಣ (Psalm 96:1-2) ಹೊಸಗೀತೆಯನು ಹಾಡಿರಿ ಪ್ರಭುವಿಗೆ, ವಿಶ್ವವೆಲ್ಲವು ಹಾಡಲಿ ಆತನಿಗೆ. ಪ್ರಭುವಿಗೆ ಹಾಡಿರಿ, ಆತನ ನಾಮವನು ಕೊಂಡಾಡಿರಿ, ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ ಸಾರಿರಿ. (ಕೀರ್ತನೆಗಳು: ತೊಂಬತ್ತ ಆರನೆಯ ಅಧ್ಯಾಯ, ಒಂದರಿಂದ ಎರಡು ವಾಕ್ಯಗಳು)

5. ಸ್ತೋತ್ರ-ದೇವರಿಗೆ ಸ್ತೋತ್ರವಾಗಲಿ (Psalm 103:1-2) ಭಜಿಸು ನನ್ನ ಮನವೇ, ಭಜಿಸು ಪ್ರಭುವನು, ನನ್ನ ಅಂತರಂಗವೇ, ಭಜಿಸು ಆತನನು, ನೆನೆ ಆತನ ಪರಮಪಾವನ ನಾಮವನು. ಭಜಿಸು ನನ್ನ ಮನವೇ, ಭಜಿಸು ಪ್ರಭುವನು. ಮರೆಯದಿರು ಆತನ ಉಪಕಾರಗಳೊಂದನು. (ಕೀರ್ತನೆಗಳು: ನೂರ ಮೂರನೆಯ ಅಧ್ಯಾಯ, ಒಂದರಿಂದ ಎರಡು ವಾಕ್ಯಗಳು)

6೬. ನಾವು ಹಾಡುವಾ (Psalm 148:11-13) ಭೂರಾಜರು, ಎಲ್ಲ ಜನಾಂಗಗಳು, ಅಧಿಕಾರಿಗಳು, ದೇಶಾಧಿಪತಿಗಳು, ಯುವಕರೂ ಯುವತಿಯರೂ, ಮುದುಕರೂ ಮಕ್ಕಳೂ, ಹೊಗಳಲಿ ಇವರೆಲ್ಲರು ಪ್ರಭುವಿನ ನಾಮವನು, ಭೂಮ್ಯಾಕಾಶ ವಿರಿದ ಆತನ ಮಹಿಮೆಯನು, ಆತನ ಮಹತ್ತಾದ ಏಕೈಕ ನಾಮವನು. (ಕೀರ್ತನೆಗಳು: ನೂರ ನಲ್ವತ್ತ ಎಂಟನೆಯ ಅಧ್ಯಾಯ, ಹನ್ನೊಂದರಿಂದ ಹದಿಮೂರು ವಾಕ್ಯಗಳು)

7. ಕತ್ತಲೆ ದಾರಿ (Psalm 23:4) ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ, ನಿನ್ನ ಕುರಿಗೋಲು, ಊರುಗೋಲು, ಧೈರ್‍ಯವನು ತರುವುದೆನಗೆ, ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ. (ಕೀರ್ತನೆಗಳು: ಇಪ್ಪತ್ತ ಮೂರನೆಯ ಅಧ್ಯಾಯ, ವಾಕ್ಯ ನಾಲ್ಕು)

8. ಸೃಷ್ಟಿಕರ್ತ ದೇವರಿಗೆ (Psalm 95:6) ಬನ್ನಿ, ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ, ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ. (ಕೀರ್ತನೆಗಳು: ತೊಂಬತ್ತ ಐದನೆಯ ಅಧ್ಯಾಯ, ವಾಕ್ಯ ಆರು)

9. ಕೊಂಡಾಡುವಾ ನಾವು (Psalm 147:1) ನಮ್ಮ ದೇವರನು ಹೊಗಳಿ ಹಾಡುವುದು ಉಚಿತ. ಆತನ ಸ್ತುತಿ ಮನೋಹರ, ಅದು ಬಲುಸೂಕ್ತ. (ಕೀರ್ತನೆಗಳು: ನೂರ ನಲ್ವತ್ತ ಏಳನೆಯ ಅಧ್ಯಾಯ, ಒಂದನೆಯ ವಾಕ್ಯ)

10. ಸ್ತುತಿಸೋಣ ಸ್ತುತಿಸೋಣ (Psalm 149:1-2) ಅಲ್ಲೆಲೂಯ ! ಹಾಡಿರಿ ಪ್ರಭುವಿಗೆ ನೂತನ ಕೀರ್ತನೆಯನು, ಭಕ್ತರ ಸಭೆಯಲಿ ಸ್ತುತಿಮಾಡಿರಿ ಆತನನು, ಆನಂದಿಸಲಿ ತಮ್ಮ ಸೃಷ್ಟಿಕರ್ತನಲಿ ಇಸ್ರಯೇಲರು, ತಮ್ಮಾ ರಾಜನಿಗೆ ಜಯಕಾರ ಮಾಡಲಿ ಸಿಯೋನಿನವರು. (ಕೀರ್ತನೆಗಳು: ನೂರ ನಲ್ವತ್ತ ಒಂಬತ್ತನೆಯ ಅಧ್ಯಾಯ, ಒಂದರಿಂದ ಎರಡು ವಾಕ್ಯಗಳು)

 

Product Price ₹ 100.00
<< return to products