Vol.33 : Jaya Jaya Yesu

Manufacturer: Rev.Fr.Jerry Sequeira

1. ಜಯ ಜಯ ಯೇಸು (Psalms 81:1-3)

“ಹಾಡಿರಿ ಶುಭಗೀತೆಯನು ಬಲಪ್ರದನಾದ ದೇವನಿಗೆ | ಮಾಡಿರಿ ಜಯಜಯಕಾರವನು ಯಕೋಬ ಕುಲದೇವನಿಗೆ || ಆರಂಭಿಸಿ ಸಂಗೀತವನು, ಬಾರಿಸಿ ಮೃದಂಗವನು | ನುಡಿಸಿರಿ ಮಧುರ ವೀಣೆಯನು, ಸ್ವರಮಂಡಲವನು || ಊದಿರಿ ಕೊಂಬನು ಅಮವಾಸ್ಯೆಯಲಿ | ಉತ್ಸವ ದಿನವಾದ ಪೂರ್ಣಿಮೆಯಲಿ” || (ಕೀರ್ತನೆಗಳು: ಎಂಬತ್ತ ಒಂದನೆಯ ಅಧ್ಯಾಯ, ಒಂದರಿAದ ಮೂರು ವಾಕ್ಯಗಳು)

2. ನನ್ನ ಜೀವ ಯೇಸಯ್ಯ (John 14:6)

ಅದಕ್ಕೆ ಯೇಸು, “ಮಾರ್ಗವೂ, ಸತ್ಯವೂ, ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು” (ಯೋವಾನ್ನನ ಸುವರ‍್ತೆ: ಅಧ್ಯಾಯ, ಹದಿನಾಲ್ಕು ಆರನೆಯ ವಾಕ್ಯ)

3. ಯೆಹೊವಾ ಇರುವಾತನು (Exo 3:14,15)

ಆಗ ದೇವರು ಹೀಗೆಂದರು: “ಇರುವವನಾಗಿ, ಇರುವವನು ನಾನೇ; ನೀನು ಇಸ್ರಯೇಲರಿಗೆ ‘ತಾನಾಗಿ ಇರುವವನು,’ ನನ್ನನ್ನು ನಿಮ್ಮ ಬಳಿಗೆ ಕಳಿಸಿದ್ದಾನೆ ಎಂದು ಹೇಳು.” ಇದು ಸದಾ ಕಾಲಕ್ಕೂ ನನ್ನ ಹೆಸರು. ಈ ಹೆಸರಿನಿಂದಲೆ ತಲ ತಲಾಂತರಕ್ಕೂ ನನ್ನನ್ನು ಸ್ಮರಿಸಬೇಕು. (ವಿಮೋಚನಕಾಂಡ: ಮೂರನೆಯ ಅಧ್ಯಾಯ, ವಾಕ್ಯಗಳು ಹದಿನಾಲ್ಕು ಹದಿನೈದು)

4. ಮನುಜನಾಗಿ (John 1:14)

“ಆ ದಿವ್ಯವಾಣಿ ಮನುಷ್ಯ ಆದರು. ಮನುಷ್ಯನಾಗಿ ನಮ್ಮೊಡನೆ ವಾಸಮಾಡಿದರು. ಅವರ ಮಹಿಮೆಯನ್ನು ನಾವು ನೋಡಿದೆವು, ಪಿತನಿಂದ ಪಡೆದ ಆ ಮಹಿಮೆ ಏಕೈಕ ಪುತ್ರನಿಗೆ ವಿÆಸಲಾದ ಮಹಿಮೆಯೇ. ಎಂದೇ ಅವರು ವರಪ್ರಸಾದದಿಂದಲೂ ಸತ್ಯದಿಂದಲೂ ಪರಿಪೂರ್ಣರಾಗಿದ್ದರು.” (ಯೋವಾನ್ನನ ಸುವರ‍್ತೆ: ಒಂದನೆಯ ಅಧ್ಯಾಯ, ಹದಿನಾಲ್ಕನೆಯ ವಾಕ್ಯ)

5. ಸೃಷ್ಟಿರ‍್ತ ದೇವರೇ (Eph 5:19,20)

“ಕೀರ್ತನೆ ಹಾಡು, ಭಕ್ತಿಗೀತೆ ಇವುಗಳಿಂದ ನಿಮ್ಮ ಭಾವಗಳನ್ನು ಪರಸ್ಪರ ವ್ಯಕ್ತಪಡಿಸಿರಿ. ಹೃದಯಾಂತರಾಳದಿAದ ಹಾಡಿ ಪ್ರಭುವಿಗೆ ಸ್ತುತಿ ಸಲ್ಲಿಸಿರಿ. ನಮ್ಮ ಪ್ರಭು ಯೇಸು ಕ್ರಿಸ್ತರ ಹೆಸರಿನಲ್ಲಿ ಯಾವಾಗಲೂ ಎಲ್ಲ ವರಗಳಿಗಾಗಿಯೂ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ” (ಎಫೆಸಿಯರಿಗೆ ಬರೆದ ಪತ್ರ: ಐದನೆಯ ಅಧ್ಯಾಯ, ಹತ್ತೊಂಬತ್ತು ಇಪ್ಪತ್ತು ವಾಕ್ಯಗಳು)

6. ಭಯಪಡಬೇಡ (Josh 1:5)

“ನಿನ್ನ ಜೀವಮಾನವಿಡೀ ಯಾರೊಬ್ಬನು ನಿನ್ನನ್ನು ಎದುರಿಸಿ ನಿಲ್ಲನು. ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರುವೆನು. ನಿನ್ನನ್ನು ಕೈ ಬಿಡುವುದಿಲ್ಲ, ನಿನ್ನನ್ನು ತೊರೆದು ಬಿಡುವುದಿಲ್ಲ.” (ಯೆಹೋಶುವನ ಗ್ರಂಥ: ಒಂದನೆಯ ಅಧ್ಯಾಯ, ಐದನೆಯ ವಾಕ್ಯ)

7. ಮಾನವನಾಗಿ ಸೃಷ್ಟಿಕರ್ತ! (Rom 10:9)

“ ‘ಯೇಸುಸ್ವಾಮಿಯೇ ಪ್ರಭು’ ಎಂದು ನೀನು ಬಾಯಿಂದ ನಿವೇದಿಸಿ, ಅವರನ್ನು ದೇವರು ಸಾವಿನಿಂದ ಪುನರುತ್ಥಾನ ಗೊಳಿಸಿದ್ದಾರೆಂದು ಹೃದಯದಿಂದ ವಿಶ್ವಾಸಿಸಿದರೆ ಜೀವೋದ್ಧಾರವನ್ನು ಹೊಂದುತ್ತೀಯೆ” (ರೋಮನರಿಗೆ ಬರೆದ ಪತ್ರ: ಹತ್ತನೆಯ ಅಧ್ಯಾಯ, ಒಂಬತ್ತನೆಯ ವಾಕ್ಯ)

8. ಪರಮ ಪೂಜ್ಯ (Mat 4:8-10)

ಅನಂತರ ಪಿಶಾಚಿ, ಯೇಸುವನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದು, ಪ್ರಪಂಚದ ಎಲ್ಲಾ ರಾಜ್ಯಗಳನ್ನೂ, ಅವುಗಳ ವೈಭವವನ್ನೂ ತೋರಿಸಿತು. “ನೀನು ನನಗೆ ಅಡ್ಡಬಿದ್ದು ಆರಾಧಿಸುವೆಯಾದರೆ ಇವೆಲ್ಲವನ್ನು ನಿನಗೆ ಕೊಡಬಲ್ಲೆ,” ಎಂದಿತು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಸೈತಾನನೇ, ತೊಲಗು. ‘ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು. ಅವರೊಬ್ಬರಿಗೇ ಸೇವೆ ಸಲ್ಲಿಸು,’ ಎಂದೂ ಪವಿತ್ರಗ್ರಂಥದಲ್ಲಿ ಬರೆದಿದೆ,” ಎಂದರು. (ಮತ್ತಾಯನ ಸುವರ‍್ತೆ: ನಾಲ್ಕನೆಯ ಅಧ್ಯಾಯ, ವಾಕ್ಯಗಳು ಎಂಟರಿAದ ಹತ್ತು)

9. ಅರ್ಪಿಸುವೆ (Rom 121)

“ಆದುದರಿಂದ ಸಹೋದರರೇ, ದೇವರ ಅಪಾರ ಕೃಪೆಯನ್ನು ನಿಮ್ಮ ನೆನಪಿಗೆ ತಂದು ನಾನು ಬೇಡಿಕೊಳ್ಳುವುದೇನೆಂದರೆ: ನಿಮ್ಮನ್ನೇ ದೇವರಿಗೆ ವಿÆಸಲಾದ, ಮೆಚ್ಚುಗೆಯಾದ, ಸಜೀವವಾದ ಬಲಿಯಾಗಿ ಸಮರ್ಪಿಸಿಕೊಳ್ಳಿರಿ. ಇದೇ ನೀವು ಸಲ್ಲಿಸಬೇಕಾದ ನಿಜವಾದ ಆರಾಧನೆ.” (ರೋಮನರಿಗೆ ಬರೆದ ಪತ್ರ: ಹನ್ನೆರಡನೆಯ ಅಧ್ಯಾಯ, ಒಂದನೆಯ ವಾಕ್ಯ)

10. ಆರಾಧಿಸುವೆ (Rev 7:11-12)

ಆಗ ಸಭಾಪ್ರಮುಖರ ಮತ್ತು ನಾಲ್ಕು ಜೀವಿಗಳ ಸಮೇತ ದೇವದೂತರೆಲ್ಲರೂ ಸಿಂಹಾಸನದ ಸುತ್ತಲೂ ನಿಂತಿದ್ದರು. ಅವರೆಲ್ಲರೂ ಸಿಂಹಾಸನದ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ, “ಆಮೇನ್, ಸ್ತುತಿಸ್ತೋತ್ರವೂ, ಘನಮಾನವೂ, ಜ್ಞಾನವೂ, ಧನ್ಯವಾದವೂ, ಶಕ್ತಿಯೂ, ಪರಾಕ್ರಮವೂ ಸಲ್ಲಲಿ ಯುಗಯುಗಾಂತರಕ್ಕೂ, ಅಮೇನ್,” ಎಂದು ಹಾಡುತ್ತಾ ದೇವರನ್ನು ಆರಾಧಿಸಿದರು. (ಪ್ರಕಟನೆಯ ಗ್ರಂಥ: ಏಳನೆಯ ಅಧ್ಯಾಯ, ವಾಕ್ಯಗಳು ಹನಂದು, ಹನ್ನೆರಡು)

Product Price ₹ 100.00
<< return to products