Vol.34 : Banni Hadona

Manufacturer: Rev.Fr.Jerry Sequeira

1. ಬನ್ನಿರಿ ಹಾಡುವ (Psalms 100:1-2)

“ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ | ಅತಿ ಸಂತೋಷದಿAದ ಸೇವೆ ಮಾಡಿ ಆತನಿಗೆ | ಹಾಡುತ, ಪಾಡುತ, ಬನ್ನಿ ಆತನ ಸನ್ನಿಧಿಗೆ ||” (ಕೀರ್ತನೆಗಳು: ನೂರನೆಯ ಅಧ್ಯಾಯ, ವಾಕ್ಯಗಳು ಒಂದರಿAದ ಎರಡು)

2. ಯೇಸು ನಾಮ ಸ್ಮರಿಸಿರಿ (Acts 4:12)

“ಇವರಿಂದಲ್ಲದೆ ಬೇರಾರಿಂದಲೂ ನಮಗೆ ಜೀವೋದ್ಧಾರವಿಲ್ಲ. ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆ ಯಾವ ನಾಮದಿಂದಲೂ ನಾವು ಜೀವೋದ್ಧಾರ ಹೊಂದುವಂತಿಲ್ಲ.” (ಪ್ರೇಷಿತರ ಕಾರ್ಯಕಲಾಪಗಳು: ಅಧ್ಯಾಯ ನಾಲ್ಕು, ಹದಿನೆರಡನೆಯ ವಾಕ್ಯ)

3. ಹಾಡಿರಿ ಹಾಡಿರಿ (Psalms 96:1-2)

“ಹೊಸಗೀತೆಯನು ಹಾಡಿರಿ ಪ್ರಭುವಿಗೆ | ವಿಶ್ವವೆಲ್ಲವು ಹಾಡಲಿ ಆತನಿಗೆ || ಪ್ರಭುವಿಗೆ ಹಾಡಿರಿ, ಆತನ ನಾಮವನು ಕೊಂಡಾಡಿರಿ | ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ ಸಾರಿರಿ ||” (ಕೀರ್ತನೆಗಳು: ತೊಂಬತ್ತ ಆರನೆಯ ಅಧ್ಯಾಯ, ವಾಕ್ಯಗಳು ಒಂದು ಎರಡು)

4. ಕೈಯ ತಟ್ಟಿ ಹಾಡೋಣ (Psalms 47:1)

“ಸರ್ವ ಜನಾಂಗಗಳೇ, ಚಪ್ಪಾಳೆ ಹೊಡೆಯಿರಿ | ಸರ್ವೇಶ್ವರನಿಗೆ ಜಯಜಯ ಘೋಷ ಮಾಡಿರಿ ||” (ಕೀರ್ತನೆಗಳು: ನಲ್ವತ್ತ ಏಳನೆಯ ಅಧ್ಯಾಯ, ಒಂದನೆ ವಾಕ್ಯ)

5. ಕುಣಿಯಿರಿ ಕುಣಿಯಿರಿ (Psalms 149:1-3)

“ಅಲ್ಲೆಲೂಯ! ಹಾಡಿರಿ ಪ್ರಭುವಿಗೆ ನೂತನ ಕೀರ್ತನೆಯನು | ಭಕ್ತರ ಸಭೆಯಲಿ ಸ್ತುತಿಮಾಡಿರಿ ಆತನನು | ಆನಂದಿಸಲಿ ತಮ್ಮ ಸೃಷ್ಟಿಕರ್ತನಲಿ ಇಸ್ರಯೇಲರು | ತಮ್ಮಾ ರಾಜನಿಗೆ ಜಯಕಾರ ಮಾಡಲಿ ಸಿಯೋನಿನವರು || ಆತನ ನಾಮವನು ಕೀರ್ತಿಸಲಿ ಕುಣಿತದಿಂದ | ಆತನನು ಭಜಿಸಲಿ ತಮಟೆ, ಕಿನ್ನರಿಗಳಿಂದ ||” (ಕೀರ್ತನೆಗಳು: ನೂರ ನಲ್ವತ್ತ ಒಂಬತ್ತನೆಯ ಅಧ್ಯಾಯ, ಒಂದರಿAದ ಮೂರು ವಾಕ್ಯಗಳು)

6. ಸ್ತುತಿಗೀತೆ ಹಾಡೋಣ (Psalms 150:1-2)

“ಅಲ್ಲೆಲೂಯ! | ಸ್ತುತಿಸಿರಿ ದೇವರನು ಆತನ ಪರಿಶುದ್ಧ ಆಲಯದಲಿ | ಆತನ ಶಕ್ತಿಯನು ಸಾರುವಾ ಆಕಾಶ ಮಂಡಲದಲಿ || ಸ್ತುತಿಸಿರಿ ಆತನ ಮಹತ್ಕಾರ್ಯಗಳಿಗಾಗಿ || ಆತನ ಮಹಾಪ್ರಭಾವಕ್ಕೆ ಅನುಗುಣವಾಗಿ ||” (ಕೀರ್ತನೆಗಳು: ನೂರ ಐವತ್ತನೆಯ ಅಧ್ಯಾಯ, ಒಂದು ಎರಡು ವಾಕ್ಯಗಳು)

7. ಬೇಡ ಬೇಡ ಪ್ರೀತಿಸಬೇಡ (1 Tim 6:7-9)

“ಹುಟ್ಟಿದಾಗ ನಾವು ಈ ಲೋಕಕ್ಕೆ ಏನನ್ನೂ ತರಲಿಲ್ಲ; ಸಾಯುವಾಗ ಏನನ್ನೂ ಕೊಂಡು ಒಯ್ಯುವುದಿಲ್ಲ. ನಮಗೆ ಊಟ, ಬಟ್ಟೆ ಇದ್ದರೆ ಅಷ್ಟೇ ಸಾಕು. ಐಶ್ವರ್ಯವಂತರಾಗಬೇಕೆAದು ಆಶಿಸುವವರು ಅನೇಕ ಪ್ರಲೋಭನೆಗಳಿಗೆ ಒಳಗಾಗುತ್ತಾರೆ. ನಿರರ್ಥಕವೂ ಹಾನಿಕರವೂ ಆದ ಆಶಾಪಾಶಗಳಲ್ಲಿ ಸಿಕ್ಕಿಬೀಳುತ್ತಾರೆ. ಇಂಥ ದುರಾಶೆಗಳು ಮನುಷ್ಯರನ್ನು ಕೇಡಿಗೂ ವಿನಾಶಕ್ಕೂ ಒಯ್ಯುತ್ತವೆ” (ತಿಮೊಥೇಯನಿಗೆ ಬರೆದ ಮೊದಲನೆಯ ಪತ್ರ: ಆರನೆಯ ಅಧ್ಯಾಯ, ಏಳರಿಂದ ಒಂಬತ್ತು ವಾಕ್ಯಗಳು)

8. ಬಿಡುಗಡೆ ಬಿಡುಗಡೆ (Rom 8:1-2)

ಆದುದರಿಂದ ಈಗ ಕ್ರಿಸ್ತಯೇಸುವಿನಲ್ಲಿ ಇರುವವರಿಗೆ ದಂಡನಾತೀರ್ಪು ಇರುವುದಿಲ್ಲ. ಏಕೆಂದರೆ ಕ್ರಿಸ್ತಯೇಸುವಿನಲ್ಲಿ ಇರುವವರಿಗೆ ಜೀವವನ್ನು ತರುವ ಪವಿತ್ರಾತ್ಮ ನಿಯಮವು ಪಾಪ-ಮರಣಗಳ ನಿಯಮದಿಂದ ನಿನ್ನನ್ನು ಬಿಡುಗಡೆ ಮಾಡಿದೆ. (ರೋಮನರಿಗೆ ಬರೆದ ಪತ್ರ: ಎಂಟನೆಯ ಅಧ್ಯಾಯ, ವಾಕ್ಯಗಳು ಒಂದರಿAದ ಎರಡು)

9. ಯೇಸುವೇ ನನ್ನ ಯೇಸುವೇ (1 Pet 1:18-19)

“ನಿಮ್ಮ ಪೂರ್ವಜರಿಂದ ಪರಂಪರೆಯಾಗಿ ಬಂದಿರುವ ನಿರರ್ಥಕ ನಡವಳಿಕೆಯಿಂದ ನಿಮ್ಮನ್ನು ಬಿಡುಗಡೆಮಾಡಲು ಕೊಡಲಾದ ಬೆಲೆಯು ಎಂಥದ್ದೆAದು ನಿಮಗೆ ತಿಳಿದಿದೆ. ಅದು ನಶಿಸಿ ಹೋಗುವ ಬೆಳ್ಳಿಬಂಗಾರವಲ್ಲ. ಬದಲಿಗೆ, ಯಾವ ನ್ಯೂನತೆಯೂ ಇಲ್ಲದ, ಯಾವ ಕಳಂಕವೂ ಇಲ್ಲದ ಬಲಿಯ ಕುರಿಮರಿಯಂಥ ಕ್ರಿಸ್ತಯೇಸುವಿನ ಅಮೂಲ್ಯ ರಕ್ತವೇ ಆ ಬೆಲೆ.” (ಪೇತ್ರನಿಗೆ ಬರೆದ ಮೊದಲನೆಯ ಪತ್ರ: ಒಂದನೆಯ ಅಧ್ಯಾಯ, ಹದಿನೆಂಟರಿAದ ಹತ್ತೊಂಬತ್ತು ವಾಕ್ಯಗಳು)

10. ಕರುಣಾಮಯನೇ (Mat 9:13)

“ನೀವು ಹೋಗಿ, ‘ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ಕರೆಯಲು ಬಂದಿರುವುದು ಧರ್ಮಿಷ್ಠರನ್ನಲ್ಲ, ಪಾಪಿಷ್ಠರನ್ನು” ಎಂದರು. (ಮತ್ತಾಯನ ಸುವರ‍್ತೆ: ಒಂಬತ್ತನೆಯ ಅಧ್ಯಾಯ, ವಾಕ್ಯ ಹದಿಮೂರು)

Product Price ₹ 100.00
<< return to products